ಸುಶೀಲಾ ಆಚಾರ್ಯರು, (ನಿಧನ: ೧೦,ಜನವರಿ, ೨೦೨೨) ದಕ್ಷಿಣ ಕನ್ನಡ ಜಿಲ್ಲೆಯ 'ಕಾರ್ಕಳ'ದವರು. ವಿದ್ಯಾರ್ಥಿದೆಸೆಯಲ್ಲೇ ಸಂಗೀತದ ಪ್ರತಿಭೆಯನ್ನು ಗುರುತಿಸಲಾಯಿತು. ಮುಂದೆ ಅವರು ಮುಂಬಯಿನಗರಕ್ಕೆ ಬಂದಮೇಲೆ ನಗರದ ಹಲವಾರು 'ಹವ್ಯಾಸೀ ನಾಟಕ ತಂಡ'ಗಳ ನಾಟಕಗಳಲ್ಲಿ ಪಾತ್ರವಹಿಸಿ ಸಹೃದಯರ ಗಮನಕ್ಕೆ ಬಂದರು.'ಸುಶೀಲಾ ಆಚಾರ್ಯ'ರು ಅಭಿನಯಿಸಿದ ಕೆಲವು ನಾಟಕಗಳ ವಿವರಗಳು ಹೀಗಿವೆ. 'ಧರ್ಮ ದುರಂತ', 'ಸತ್ಯಂ ವದ ಧರ್ಮಂ ಚರ', 'ರಾಧೇಯ' 'ತೊಟ್ಟಿಲು ತೂಗಿದ ಕೈ', == ಹಿಂದೂಸ್ತಾನಿ ಸಂಗೀತಾಸಕ್ತರು == ಹಿಂದೂಸ್ತಾನೀ ಸಂಗೀತವನ್ನು ಅರಗಿಸಿಕೊಂಡಿರುವ ಸುಶೀಲಾ ಆಚಾರ್ಯರವರು,'ಹಾರ್ಮೋನಿಯಂ' ಬಾರಿಸಲು ಬಹಳ ಇಷ್ಟಪಡುತ್ತಾರೆ.'ಸುಶೀಲಾ ಆಚಾರ್ಯ'ರು ಹಲವಾರು ಸಮೂಹ ಗಾಯನ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 'ರಸಮಂಜರಿ,' 'ಸುಗಮ ಸಂಗೀತ', ಮುಂತಾದವುಗಳು. == 'ಮುಂಬಯಿನ ಚಿನ್ಮಯ ಮಿಶನ್ ಸಂಸ್ಥೆ' == 'ಸುಶೀಲಾ ಆಚಾರ್ಯ'ರ ಪ್ರತಿಭೆ ಮತ್ತು ಸಂಗೀತಾಸಕ್ತಿಗಳನ್ನು ಗುರುತಿಸಿ, ಗೌರವಿಸಿದೆ. ಹಾಗಾಗಿ ಚಿನ್ಮಯ ಮಿಶನ್ ನ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಸುಶೀಲಾ ಆಚಾರ್ಯರವರು, ಸಕ್ರಿಯವಾಗಿ ಭಾಗವಹಿಸಿದ್ದಾರೆ. == ಪ್ರಶಸ್ತಿಗಳು == === ಸಾಧನ ಶಿಖರ ಪ್ರಶಸ್ತಿ === ಪ್ರತಿವರ್ಷವೂ ಮುಂಬಯಿ ಕರ್ನಾಟಕ ಸಂಘ,ನಾಡು,ನುಡಿ,ಸಾಹಿತ್ಯ,ಸಂಸ್ಕೃತಿ,ಸಂಘಟನೆ,ಶಿಕ್ಷಣ,ರಂಗಭೂಮಿ ಚಟುವಟಿಕೆ,ಪತ್ರಿಕೋದ್ಯಮ,ಇತ್ಯಾದಿ ಕ್ಷೇತ್ರಗಳಲ್ಲಿ ಗಮನೀಯ ಸೇಗೆಗೈದ ಮೂವರು ಸಾಧಕರಿಗೆ,'ಸಾಧನ ಶಿಖರ ಗೌರವ ಪುರಸ್ಕಾರ'ವನ್ನು ನೀಡುತ್ತಾ ಬಂದಿದೆ. ಈ ಪುರಸ್ಕಾರವು, ತಲಾ 'ಐದುಸಾವಿರ ರುಪಾಯಿಗಳ ನಗದು ಹಣ','ಸ್ಮರಣಿಕೆ', ಹಾಗೂ 'ಸನ್ಮಾನಪತ್ರ'ಗಳನ್ನು ಒಳಗೊಂಡಿದೆ. ಸನ್,೨೦೧೧ ರ ಸರಣಿಯ ಪುರಸ್ಕಾರವನ್ನು 'ಸುಶೀಲಾ ಆಚಾರ್ಯರೂ', ತಮ್ಮ ಇನ್ನಿಬ್ಬರು ಸಾಧಕರ ಜೊತೆಯಲ್ಲಿ ಪಡೆದರು. ಶ್ರೀಮತಿ. ಪ್ರಮೋದಿನಿ ರಾವ್, ಸುಶೀಲಾ ಆಚಾರ್ಯರ ಮಗಳು, ಹಿಂದುಸ್ತಾನಿ ಸಂಗೀತದಲ್ಲಿ ಪರಿಣಿತರು. ಚಿನ್ಮಯ ಆಶ್ರಮದ ನಾದಬಿಂದು ವಿಭಾಗದಲ್ಲಿ ತಾಯಿ,ಮಗಳಿಬ್ಬರೂ, ಅಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. == ನಿಧನ == ಶ್ರೀಮತಿ ಸುಶೀಲಾ ಆಚಾರ್ಯ ಅವರು ೧೦, ಜನವರಿ, ೨೦೨೨ ರಂದು ನಿಧನರಾದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 'ನಮ್ಮ ಹಿರಿಯಕ್ಕ,ಸುಶೀಲಕ್ಕ' ನೇಸರು,ಫ಼ೆಬ್ರವರಿ,೨೦೨೨, ಮೈಸೂರ್ ಅಸೋಸಿಯೇಷನ್